Sunday, April 25, 2010

ನೋಟವಲ್ಲ ಪಾಠ A Sad Ending-3 :-((


ಬಂದಳವಳು ನಲಿಯುತ, ಕುಣಿಯುತ, ನಗುತ ನಗುತಾ   
ಕಂಡಳವಳು ಚಂದಿರನ ರಂಗಿನಂತೆ, ದಂತದ ಗೊಂಬೆಯಂತೆ
ಮಾತೆಂಬ ಸುರಿಮಳೆಯ ಸುರಿಸಿದಳು ಬರ ಬರನೆ
ತೋಯ್ದರೆಲ್ಲರು ಮೈ ಮರೆಯುತಾ, ಕಾಯ ಮರೆಯುತಾ
ನಾ ನಿಂತೆ ಒಂಟಿಗಾಲಲಿ ಅವಳಿಗಾಗಿ ಕಾಯುತಾ
call ಇಲ್ಲ, ವಿಷಯ ವಿಲ್ಲ, ಏನೇನೂ ಇಲ್ಲ ಇದುವರೆಗೇ...





ಹುಟ್ಟಿತಂದು ಪ್ರೀತಿ ಮನದಾಳದಿ
ಅವಳೆಂದಳು ಸಾಯಿ ಎಲ್ಲದಕ್ಕೂ ಸಾಯಿ
ನಾ ನಿಂತೆ ಅವಳಿಗೆ ಕಂಡ ಕಂಡ ಜಾಗದಲಿ
ದಿನ ಕಳೆಯಿತು, ತನು ಬಳಲಿತು ನೆನೆದು ವಿರಹ ವೇದನೆ
ಬಂದಿತೊಂದು ಓಲೆ ಅವಳ ನಾಮದಲಿ
ಪ್ರೇಮ ಪತ್ರವಲ್ಲ, ವಿರಹದೊಲೆಯಲ್ಲ ಅದು ಕರೆಯೋಲೆ,
                                                        ನೋಡುವೆ ಕರೆಯೋಲೆ ಅವಳ ನಾಮದಲೀ 

ನಾಮ ತಿರುನಾಮ, ಮೂರು ನಾಮ ಅಲ್ಲ..

ನೂರುನಾಮ!!! ಮೈಮರೆತ ಈ ಮದನನಿಗೆ,
ಕಲಿಸಿದಳು ಪಾಟವ ಪರಿಪಾಟವ ಪರಿ ಪರಿಯಾಗಿ
ವಿಧಿಯಾಟ, ವಿಷದೂಟ ಈ ಪ್ರೀತಿ ಪಾಟದಲಿ,
ನಂಬದಿರಿ ಈ  ಪ್ರೀತಿಯಾಟದಲಿ.... :-(( 
                            -Nishanth MV

Friday, April 23, 2010

A Cute Proposal Song-2



ಮುಂಗಾರಿನ ಮಳೆಯಲ್ಲಿ.. 
ತಂಪಾದ ತಿಳಿ ಗಾಳಿಯಲಿ..
ನಸುಕಾದ ಮುಂಜಾವಿನಲಿ.. 
ಬರಿದಾದ ಈ ಹೃದಯದಲಿ..
  ನಿನ್ನ ನೋಡುವ ಆಸೆ ಬಂತು..                     ಮಾತಾಡದ ಮೌನ ತಂತು..!!
  ಎಂದು ಮರೆಯದ ಗಾಯವಾಯ್ತು.. 
  ನನಗೇಕೆ ಹೀಗಾಯ್ತು.....!? 
    ಹೇಳೆ ನೀನು ನಲ್ಲೇ.. 
    ನನಗೆ ನೀನು ಅಲ್ಲೇ..
    ಮರೆಯಲು ಹೋದರೂ..
    ಮರೆಯದಾದೆ ನಿನ್ನನೇ...!!
                             
ನಿನ್ನ ಕಣ್ಣಿನ ನೋಟವೂ.. ಕೊಲ್ಮಿoಚಿನಾ ಬಾಣವೂ..ನಿನ್ನ ಪ್ರೀತಿಯಾ ಮಾತದು.. 
ನನ್ನ ಹೃದಯದಾ ಮಿಡಿತವು..
ನಿನ್ನ ಉಸಿರೇ ಸವಿಗಾನ..
ನಿನ್ನ ನುಡಿಯೇ ಸಿಹಿಗವನ..
ನಿಜ ಹೇಳಲೇನು...!? ನನ್ನ ಜೀವದ ಭಾವ ನೀನು..!!
ನಿನ್ನ ಒಪ್ಪಿಗೆ ಕೇಳದೇ ಪ್ರೀತಿಯು ಬಂದಿದೇ..!
ಏತಕೋ ತಿಳಿಯದೆ ಮನವು ನಿನ್ನನೇ ಬಯಸಿದೇ..!!
                                                     
ನಿನ್ನ ನೋಡಿದ ಕ್ಷಣದಲೇ
                     ಪ್ರೀತಿಯು ಮೂಡಿದೆ..!! 
                                    ಮಾತನಾಡಿದ ಕ್ಷಣದಲೇ 
                                                      ಆಸೆ ಚಿಮ್ಮಿ ಹೊಮ್ಮಿದೇ..!!
                                                            
                                                    -Nishanth MV

A Cute Love Song :-((

 
ಕಾರ್ಮೊಡವು ಸೂಸಿದೇ.. 
ಮಳೆ ಬರುವಾ ಸೂಚನೇ...
ನಿನ್ನ ಕಂಗಳೂ ತೋರಿದೇ.. 
ಪ್ರೀತಿಯಾ.. ಭಾವನೇ...
ಹೇಳಲಾಗದೇ ಹೋದರೇ.. 
ಹೇಗೆ ನೀ... ಕಾರಣಾ....!?
ಮನದಾಳದಾ ಈ ಪ್ರೀತಿಗೆ..
ಮ್ ಮ್... ಹೆ ಹೇ ಹೇ ಹೇ...!!
                            
         

                   
         ಕಾರ್ಮೊಡವು ಸೂಸಿದೇ.. 
         ಮಳೆ ಬರುವಾ ಸೂಚನೇ...
         ಕಣ್ಣಂಚಲಿ ತೋರಿದೇ..
         ಪ್ರೀತಿಯಾ ಭಾವನೇ...
         ಹೇಳದೆ ಹೋದೆಯಾ.. 
         ಏಕೆ ನೀ ಕಾರಣಾ...!?



              ನೀ.. ನೋಡದೆ ಇದ್ದರೂ...!
    ನೀ.. ಹೇಳದೆ ಹೋದರೂ...!
    ನೀ.. ಮೌನಿಯೆ ಆದರೂ...!
    ನಾ.. ನಿನ್ನಯ ನಲ್ಲನೂ...!!
    ಬೆಳದಿಂಗಳಾ ಬೆಳಕಿನಂತೆ.. 
    ನಾ ಕಂಡೆನೆ ನಿನ್ನ ನಲ್ಲೇ...! 
    ಪ್ರೀತಿಗೇ .. ಸವಿ ಮಾತಿಗೇ... ನಾ      
             ಮರೆತೆನೆ ನನ್ನನೇ...!! 

    ಹೇಳದೇ.. ಹೋದೆಯಾ... ಕಾರಣಾ....!?
                     ಕಾಡಿದೇ ಮನವು ಕ್ಷಣ ಕ್ಷಣಾ..!! 
                               ನಿನ್ನನೇ ಹುಡುಕಿದೇ.... ಅನುದಿನಾ...!! :-)) 
                                                   -Nishanth MV